ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ ?

ಅಕ್ಟೋಬರ್ 16, 2013 - Leave a Response

ಭಗತ್ ಸಿಂಗ್ ರವರ ಬಗ್ಗೆ ಒಂದು ಪರಿಚಯ

ಸೆಪ್ಟೆಂಬರ್ 28, 2013 - Leave a Response

bhagat-singh-in-lahore-jail

ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು

– ಭಗತ್ ಸಿಂಗ್ – 

ಸೆಪ್ಟಂಬರ್ 27, 1907ರಂದು ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಭಗತ್ ಸಿಂಗ್ ರವರ ಜನನವಾಯಿತು. ಸ್ವಾತಂತ್ರ್ಯ ಚಳುವಳಿಯನ್ನು ನಡೆಸಿ ಯುವ ಜನತೆಗೆ ಪ್ರೀತಿ ಪಾತ್ರರಾಗಿದ್ದ ಭಗತ್ ಸಿಂಗ್ ರವರು ತನ್ನ 23ನೇ ವಯಸ್ಸಿನಲ್ಲಿ 1931ರ ಮಾಚರ್್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತನ್ನ ಇಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ ಜೊತೆ ಬ್ರಿಟೀಷ್ರ ದುರಾಡಳಿತದ ಭಾಗವಾಗಿ ನೇಣಿಗೆ ಶರಣಾಗತಿಯಾದರು.

ವ್ಯಕ್ತಿಗಳನ್ನು ತುಳಿದು ಹಾಕುವುದರಿಂದ ಯಾರು ಅವರ ವಿಚಾರಗಳನ್ನು ಕೊಲ್ಲಲಾರರು.
1919ರ ಏಪ್ರಿಲ್ 13ರಂದು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟೀಷರ ಕ್ರೌರ್ಯದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗಯ್ಯಲಾಯಿತು. 1919ರ ಏಪ್ರಿಲ್ 20ರಂದು ಭಗತ್ ಸಿಂಗ್ ರು ಜಲಿಯನ್ ವಾಲಾಬಾಗ್ ಪ್ರದೇಶಕ್ಕೆ ಹೋಗಿ ಮೂಕ ಪ್ರೇಕ್ಷಕರಾಗಿ ಅತ್ತಿಂದಿತ್ತ ಓಡಾಡಿ ರಕ್ತಸಿಕ್ತವಾದ ಮಣ್ಣನ್ನು ತನ್ನ ಡಬ್ಬಿಯಲ್ಲಿ ಹಾಕಿಕೊಂಡರು. ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರಡು ಸಾವಿರ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ. ಎಂಬ ಭಾವನೆ ಭಗತ್ ಸಿಂಗ್ ರ ಮನಸ್ಸಿನಲ್ಲಿ ಅಂದುಕೊಂಡರು.

ಸ್ವಾತಂತ್ರ್ಯ ಹೋರಾಟವನ್ನು ಸಂಘಟಿತಗೊಳಿಸಲು 1926ರ ಮಾರ್ಚ್ ನಲ್ಲಿ ನೌಜವಾನ್ ಭಾರತ್ ಸಭಾ ಎಂಬ ಸಂಘಟನೆಯನ್ನು ಪ್ರಪ್ರಥಮವಾಗಿ ರಚಿಸಿದಾಗ ರಾಮಕಿಶನ್ ಅಧ್ಯಕ್ಷರಾಗಿಯೂ ಭಗತ್ ಸಿಂಗ್ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. ನಂತರ ದಿನಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು, 1928ರ ಸೆಪ್ಟಂಬರ್ನಲ್ಲಿ ದೆಹಲಿಯ ಫಿರೋಜ್ಷಾ ಕೋಟ್ಲಾದಲ್ಲಿ ನಡೆದ ಸಭೆಯಲ್ಲಿ ಭಗತ್ ಸಿಂಗ್, ಸುಖದೇವ್, ಬಿಜೋಯ್ ಕುಮಾರ್ ಸಿನ್ಹ, ಬ್ರಹ್ಮದತ್, ಸುರೇಂದ್ರ ಪಾಂಡೆ, ಜತೀಂದ್ರನಾಥ್ ದಾಸ್, ಯಶ್ ಪಾಲ್, ಚಂದ್ರಶೇಖರ್ ಆಜಾದ್, ಮಹಾಬೀರ್ ಸಿಂಗ್, ಭಗವತಿ ಚರಣ್, ರಾಜಗುರು, ಸೋಹನ್ ಸಿಂಗ್ ಜೋಶ್ ಇತ್ಯಾದಿ ಪ್ರಮುಖರು ಅರವತ್ತು ಮಂದಿ ಭಾಗವಹಿಸಿದ್ದ ಈ ಸಭೆಯಲ್ಲಿ 5 ಮಂದಿ ಮಹಿಳೆಯರಿದ್ದರು. ಸಮಾವೇಶದ ಕಾರ್ಯದರ್ಶಿ ಭಗತ್ಸಿಂಗ್, ಅದಾಗಲೇ ಒಂದು ಸಾವಿರ ಸದಸ್ಯರು ಸಂಘಟನೆಯಲ್ಲಿದ್ದರು. ಹೋರಾಟದ ಮಾರ್ಗಸೂಚಿಯಾಗಿ ಸಂಘಟನೆಗೆ ಸಮಾಜವಾದಿ ತತ್ವದ ಆಧಾರವಿರಬೇಕೆಂಬ ಸಲಹೆಯನ್ನು ಭಗತ್ ಸಿಂಗ್ ಸಭೆಯ ಮುಂದಿಟ್ಟು ನಂತರ ಹಿಂದುಸ್ತಾನ್ ಸಮಾಜವಾದಿ ಗಣತಂತ್ರ ಎಂಬ ಹೆಸರನ್ನು ಪಡೆಯಿತು.

ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು – ಭಗತ್ ಸಿಂಗ್

1929ರ ಏಪ್ರಿಲ್ 8 ಅಂದಿನ ಬ್ರಿಟೀಷ್ ಸರಕಾರದ ಅಧಿಕಾರಾವಧಿಯಲ್ಲಿ ಕಾರ್ಮಿಕ ವಿವಾದಗಳ ಕಾಯಿದೆಯನ್ನು ಶಾಸನಸಭೆಯಲ್ಲಿ ಮಂಡಿಸಲು ನಿಗದಿಯಾಗಿದ್ದ ದಿನ. ಆ ದಿನದ ಆಯ್ಕೆ ಕೇವಲ ಆಕಸ್ಮಿಕವಲ್ಲ, ಭಾರತದ ಕಾರ್ಮಿಕ ವರ್ಗಕ್ಕೆ ಬಿಡಿಸಲಾಗದ ಕೈಕೋಳವನ್ನು ತೊಡಿಸಲು ಬ್ರಿಟೀಷ್ ಸರಕಾರ ಆ ದಿನವನ್ನು ಮೀಸಲಾಗಿರಿಸಿತ್ತು ಮತ್ತು ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯ ಯೋಜನೆಯ ಕಾರ್ಮಿಕ ವರ್ಗದ ಪರವಾರ ಪ್ರಬಲ ಕ್ರಮವಾಗಿತ್ತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ್ ಇಬ್ಬರು ಅಂದು ಕಾಯಿದೆಯನ್ನು ವಿರೋಧಿಸಬೇಕು ಮತ್ತು ಕಾಯಿದೆಯಲ್ಲಿ ಅಡಕವಾಗಿರುವ ಕಾರ್ಮಿಕ ವಿರೋಧಿ ಅಂಶವನ್ನು ಜನತೆಗೆ ತಿಳಿಸಬೇಕೆಂಬ ಸಂಘಟನೆಯ ಸಭೆಯ ತೀರ್ಮಾನದಂತೆ ಅಂದಿನ ಅಸೆಂಬ್ಲಿ ಹಾಲ್ನಲ್ಲಿ ಬಾಂಬು ಎಸೆದು ಗದ್ದಲ ಎಬ್ಬಿಸಿ ಬಂಧಿತರಾದರು ಮತ್ತು ಇಂಕ್ವಿಲಾಬ್ ಜಿಂದಾಬಾದ್ ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ ಎಂಬ ಘೋಷಣೆಯನ್ನು ಕೂಗಿದರು. ಎರಡು ವರ್ಷಗಳ ಜೈಲುವಾಸ, ಜೈಲಿನಲ್ಲೂ ಮತ್ತು ಹೊರಗೂ ದೊಡ್ಡ ಮಟ್ಟದಲ್ಲಿ ಚಳುವಳಿಗಳು ನಡೆದವು ಜೈಲಿನಲ್ಲೂ ಭಗತ್ಸಿಂಗ್ ಮತ್ತು ಸಂಗಾತಿಗಳು ಉಪವಾಸ ಸಹ ನಡೆಸಿದರು. ಎರಡು ವರ್ಷಗಳ ನ್ಯಾಯಾಲಯದಲ್ಲಿ ವಿಚಾರಣೆಯ ನಂತರ 1930ರ ಅಕ್ಟೋಬರ್ 7ರಂದು ತೀರ್ಪನ್ನು ಪ್ರಕಟಿಸಿ 1931ರ ಮಾಚರ್್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಮೂವರನ್ನು ಗಲ್ಲಿಗೇರಿಸಲಾಯಿತು.

– ಆಧಾರ ಡಾ||ಜಿ.ರಾಮಕೃಷ್ಣರವರ ‘ಭಗತ್ ಸಿಂಗ್’ ಎಂಬ ಪುಸ್ತಕದಿಂದ

bhagat-singh-long-live-the-revolution-bhagats1-small-400x400-imadmfyaaehvaszp

ಭಗತ್ ಸಿಂಗ್ ರ ಆಶಯಗಳನ್ನು ಪಾಲಿಸುತ್ತಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆಯು ದೇಶಾದ್ಯಂತ ಸರ್ವರಿಗೂ ಶಿಕ್ಷಣ – ಸರ್ವರಿಗೂ ಉದ್ಯೋಗ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಗಳ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಭ್ರಷ್ಟಾಚಾರವನ್ನು ತಡೆಗಟ್ಟಿ, ಕನಿಷ್ಟ ಕೂಲಿ ಜಾರಿ ಮಾಡಿ, ಡೊನೇಷನ್ ಹಾವಳಿ ತಡೆಗಟ್ಟಿ, ಉಚಿತ ಶಿಕ್ಷಣವನ್ನು ಜಾರಿಗೊಳಿಸಿ, ಬೆಲೆ ಏರಿಕೆಯನ್ನು ತಡೆಗಟ್ಟಿ, ರೇಷನ್ ವ್ಯವಸ್ಥೆಯನ್ನು ಬಲಗೊಳಿಸಬೇಕು ಜೀವನಕ್ಕೆ ಅವಶ್ಯಕವಾಗಿರುವ ಎಲ್ಲಾ ವಸ್ತುಗಳನ್ನು ರೇಷನ್ ಮೂಲಕವೇ ನೀಡಬೇಕು. ಎಂಬ ಹಲವು ಸಮಸ್ಯೆಗಳ ವಿರುದ್ಧ ಹೋರಾಟವನ್ನು ನಡೆಸುತ್ತಿರುವ ಸಂಘಟನೆಯಾಗಿದೆ. ಜೊತೆಯಲ್ಲಿ ಯುವಜನರಿಗೆ ನಿರಂತರವಾಗಿ ವೈಜ್ಞಾನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ, ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟವನ್ನು ನಡೆಸುತ್ತಾ ಬಂದಿದೆ. ದೇಶದಲ್ಲೇ ಅತಿದೊಡ್ಡ ಸಂಘಟನೆಯಾಗಿಯಾಗಿ ಬೆಳೆದಿದೆ.

Che Guevara

ಸೆಪ್ಟೆಂಬರ್ 17, 2012 - One Response

Condemn Politics of Murder

ಫೆಬ್ರವರಿ 22, 2012 - Leave a Response


Date:

22 February 2012

Press Statement

The Polit Bureau of the Communist Party of India (Marxist) has issued the following statement:

Condemn Such Politics of Murder

The Polit Bureau of the CPI(M) strongly condemns the murder of two leaders of our Party in West Bengal, both members of the Burdwan district committee of the CPI(M) – Comrade Pradip Tah and Comrade Kamal Gayen – in open daylight in the Dewandighi on the outskirts of the Burdwan town by the Trinamool Congress goons. Comrade Pradip was a former MLA representing the Burdwan (North) Assembly constituency. These heinous murders took place when both these leaders were leading a huge procession of people which was protesting against attacks on Party sympathisers campaigning for the all-India strike of February 28 called by the Central trade unions.

These are murders most foul and is part of planned attacks and killings of Left leaders and activists after the assumption of office by the Mamata Banerjee led government. These two murders takes up the toll of people killed to 58 since the change of government.

These attacks come in the background of the massive popular mobilization, at the call of the CPI(M), in the Brigade Parade Ground on February 19 which reflected people’s anger against the politics of violence and vendetta. Frustrated by the growing resistance of the people, the TMC led goons have indulged in this gruesome act.

This act of violence is also to try and at any cost stop the certain overwhelming success of the industrial strike at the call of the Central trade unions.

The Polit Bureau calls upon the Party units and all other Left and democratic minded people in the country to raise their voice of protest against such politics of violence and terror.

ತಾನ್ಯಾರೆಂದು ಗುರುತಿಸಿಕೊಳ್ಳದ ವೇಲಾಯುದ್ಧಂ

ನವೆಂಬರ್ 11, 2011 - Leave a Response

Tamil Film, Corruption,

ಇತ್ತೀಚಿಗೆ ಬರುತ್ತಿರುವ ಹಲವು ಸಿನಿಮಾಗಳಲ್ಲಿ ಕೇವಲ ಮನೋರಂಜನೆ ಮಾತ್ರವಲ್ಲದೆ ಅದರ ಜೊತೆಜೊತೆಗೆ ಸ್ಥಳೀಯ ಸಮಸ್ಯೆಗಳು, ದೇಶೀಯ ಸಮಸ್ಯೆಗಳ ಪರಿಹಾರಕ್ಕಾಗಿ ಒನ್ ಮ್ಯಾನ್ ಹೀರೋ ಮೂಲಕ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಹೀರೋಗಳಿಂದಲೆ ಸಾಧ್ಯ ಎಂದು ಹೇಳಲಾಗುತ್ತದೆ. ಇದೇ ರೀತಿಯ ಮತ್ತೊಂದು ಚಿತ್ರ ತಮಿಳಿನ ವೇಲಾಯುದ್ಧಂ.

ತಂದೆ-ತಾಯಿ ಇಲ್ಲದೆ, ತನ್ನ ತಂಗಿಗಾಗಿ(ಸರಣ್ಯಮೋಹನ್) ಮಾತ್ರ ಜೀವನ ನಡೆಸುವ ಹಳ್ಳಿಯಲ್ಲಿ ಹಾಲು ಮಾರುವ ನಾಯಕ ವೇಲಾಯುದ್ಧಂ(ವಿಜಯ್). ತಂಗಿಯನ್ನು ಯಾವಾಗಲೂ ಸಂತೋಷದಿಂದಿಡುವ ವೇಲ್ ಊರಿನ ಜನರನ್ನು ಆಟವಾಡಿಸುತ್ತಾನೆ. ಮಾಧ್ಯಮದ ವರದಿಗಾರರು ತನ್ನ ವರದಿಯಲ್ಲಿ ಬೇರೆಯವರಿಗಿಂತ ಹೆಚ್ಚು ವಿಶೇಷವಾಗಿ ಆಕರ್ಷಣೆಯಾಗಿರಬೇಕೆಂದು ಬಯಸುತ್ತಾರೆ. ನಾಯಕಿ (ಜೆನಿಲಿಯಾ ಡಿ’ಸೋಜಾ) ಮತ್ತು ಇಬ್ಬರು ಗೆಳೆಯರು ಈ ಕೆಲಸಕ್ಕೆ ಮುಂದಾಗಿ ನಾಯಕಿ ಆಸ್ಪತ್ರೆ ಸೇರುವಂತಾಗುತ್ತದೆ. ಎಲ್ಲಾ ವಿವರವನ್ನು ಬರೆದಿಡುವ ನಾಯಕಿ ಕೊನೆಯಲ್ಲಿ ‘ವೇಲಾಯುದ್ಧಂ’ ಎಂಬ ಹೆಸರು ಬರೆಯುತ್ತಾಳೆ. ಈತ ಯಾರೆಂದು ಗೊತ್ತಿಲ್ಲ. ಸ್ವತಃ ನಾಯಕನಿಗೂ ಗೊತ್ತಿರುವುದಿಲ್ಲ. ಇವೆಲ್ಲ ತಾನೂ ಮಾಡುತ್ತಿರುವೆನೆಂದು ಸಹ ಗೊತ್ತಿರುವುದಿಲ್ಲ.

ಇದರಿಂದ ದೊಡ್ಡ ಸುದ್ಧಿಯಾಗಿ ವೇಲಾಯುದ್ಧಂ ಎಂಬ ಹೆಸರು ನಕ್ಷತ್ರದಂತೆ ಮಿಂಚುತ್ತದೆ. ನಾಯಕ ತನ್ನ ತಂಗಿಯ ಮದುವೆ ಕೂಡಿಹಾಕಿದ ಚಿಟ್ ಫಂಡ್ ಹಣ ಪಡೆಯಲು ಕುಟುಂಬ ಸಮೇತ ನಗರಕ್ಕೆ ಆಗಮಿಸುತ್ತಾನೆ. ನಗರದಲ್ಲಿ ನಡೆದ ಪ್ರಮುಖ ರೈಲ್ವೇ ನಿಲ್ದಾಣದಲ್ಲಿನಲ್ಲಿರುವ ಬಾಂಬ್, ಜನನಿಬಿಡ ಜಾತ್ರೆಯಲ್ಲಿಟ್ಟಿದ ಬಾಂಬ್ ನಿಷ್ಕ್ರಿಯ, ಹೇಳ ಹೆಸರಿಲ್ಲದೆ ಪಾಳು ಬಿದ್ದಿರುವ ಜಾಗದಲ್ಲಿ ಬಾಂಬ್ ತಯಾರಿಕಾ ಕೆಲಸದಲ್ಲಿ, ಕಳ್ಳ ನೋಟ್ ಮುದ್ರಣದ ಸ್ಥಳಕ್ಕೆ ತನ್ನ ಅಚ್ಯಾತುರ್ಯ ಮತ್ತು ಅನಿರೀಕ್ಷಿತ ಭೇಟಿಯಿಂದ ಸಮಸ್ಯೆಗಳು ಪ್ರದಶರ್ಿತವಾಗುತ್ತದೆ. ಇದೆಲ್ಲವೂ ತಾನು ಮಾಡುತ್ತಿರುವೆಂದು ಅರಿಯದಿರುವ ನಾಯಕ.

ನಾಯಕಿಯು ತನ್ನ ಬರಹ ಮತ್ತು ಘಟನೆಗಳ ವಿವರಣೆ ನೀಡುತ್ತಾಳೆ. ಮುಂದಿನ ಕೆಲಸಕ್ಕೆ ಅಣಿಯಾಗಲು ಹುರಿದುಂಬಿಸುವಳು ಇದು ತನ್ನಿಂದ ಸಾಧ್ಯವಿಲ್ಲವೆನ್ನುವ ನಾಯಕ ನಗರ ಜೀವನ ಮತ್ತು ಚಿಟ್ ಫಂಡ್ನಿಂದ ತನಗೂ ಒಳಗೊಂಡಂತೆ ನೂರಾರು ಜನರಿಗೆ ಮೋಸವಾದಾಗ ಅದನ್ನು ಎದುರಿಸುವವನು ಕೊನೆಯವರೆಗೂ ತನ್ನ ವಿಚಿತ್ರ ವೇಷ ಭೂಷಣದಿಂದ ಸಾಮಾನ್ಯ ಜನರ ಮಧ್ಯೆ ಕಾಣಿಸಿಕೊಳ್ಳದೇ ಸಮಸ್ಯೆಗಳನ್ನು ಎದುರಿಸುವುದು ಒಬ್ಬ ವ್ಯಕ್ತಿಯಿಂದಲ್ಲ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸುತ್ತದೆ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ಕೇವಲ ಒಬ್ಬ ವ್ಯಕ್ತಿಯ ಹೋರಾಟದಿಂದ ಸಾಧ್ಯವಿಲ್ಲ ಬದಲಾಗಿ ಜನ ಸಮೂಹವೂ ಇದರಲ್ಲಿ ಭಾಗಿಯಾಗಬೇಕಾಗಿದೆ.

ಜನರನ್ನು ಮೋಸ ಮಾಡುವ ಅಧಿಕಾರಶಾಹಿಯ ವ್ಯಕ್ತಿಗಳು ಯಾರ ಜೊತೆಯಾದರೂ ಕೈಜೋಡಿಸುತ್ತಾರೆ. ಅದು ಬಂಡವಾಳದಾರ ಅಥವಾ ಭಯೋತ್ಪಾದಕರು ಯಾರ ಜೊತೆ ಕೈ ಜೋಡಿಸಿದರೂ ಕೂಡಾ ತನಗೆ ಇದರಿಂದ ಏನು ಲಾಭ ಅಂತ ಹುಡುವವ ಸಾಮಾನ್ಯ ಜನರನ್ನು ಮರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಆಳುತ್ತಿರುವ ಇದೆ ಕೆಲಸವನ್ನು ಮಾಡುತ್ತಿದ್ದಾರೆ.

ಭಯೋತ್ಪಾದಕರಿಗೆ ರಕ್ಷಣೆ ನೀಡುವ ರಾಜಕಾರಣಿಗಳು, ಜನರು ಸತ್ತರೆ ಮಾತ್ರ ತಾನು ಉಳಿಯಲು ಸಾಧ್ಯ ಎಂಬ ನಂಬಿಕೆಯಲ್ಲಿರುವ ಭಯೋತ್ಪಾದಕರು. ಅವರನ್ನು ಬೆಂಬಲಿಸುವ ಹಲವು ರಾಜಕಾರಣಿ ಇಂದು ಹೆಚ್ಚಾಗುತ್ತಿದೆ. ಜನರ ಹಣವನ್ನು ವಂಚಿಸುವ ಶ್ರೀಮಂತರ ಜೂಜಾಟ, ನಕಲಿ ಹಣದ ಮುದ್ರಣ, ಕಳ್ಳ ಹಣ ಸಾಗಾಣೆಯಂತಹ ಕಥಾವಸ್ತುವುಳ್ಳ ಚಿತ್ರ ವೇಲಾಯುದ್ಧಂ. ಚಿತ್ರ ಎಲ್ಲೂ ಎಳೆಯಲಾಗಿಲ್ಲ ಕಥೆಯನ್ನು ಬಿಗಿ ಹಿಡಿಯಲಾಗಿದೆ.

vijay, saranya mohan, velayutham,